
19th December 2024
*ನಗರಸಭೆ ವ್ಯಾಪ್ತಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗಾಗಿ ಅರ್ಹ ಮಹಿಳಾ ಸ್ವ- ಸಹಾಯ ಸಂಘಗಳಿಂದ ಅರ್ಜಿ ಆಹ್ವಾನ: ಪೌರಾಯುಕ್ತ ಉಮೇಶ ಚವ್ಹಾಣ*
*ವಸೂಲು ಮಾಡಿದ ಮೊತ್ತದಲ್ಲಿ ಶೇಕಡವಾರು 5ರಷ್ಟನ್ನು ಪ್ರೋತ್ಸಾಹಧನದ ರೂಪದಲ್ಲಿ ವಸೂಲಿ ಮಾಡಿದವರಿಗೆ ನೀಡಲು ಸರ್ಕಾರವು ಆದೇಶ*
ಯಾದಗಿರಿ: ಡಿಸೆಂಬರ್, 19 :
ಯಾದಗಿರಿ ನಗರಸಭೆ ವ್ಯಾಪ್ತಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು ಸಂಗ್ರಹಿಸಲು ನಗರಸಭೆ ವ್ಯಾಪ್ತಿಯ ಡೇ- ನಲ್ಮಾ ಅಭಿಯಾನದಡಿ ನೋಂದಾಯಿಸಲ್ಪಟ್ಟ ಅರ್ಹ ಮಹಿಳಾ ಸ್ವ- ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಅವರು ತಿಳಿಸಿದ್ದಾರೆ.
ಯಾದಗಿರಿ ನಗರ ಸ್ಥಳೀಯ ಸಂಸ್ಥೆಯಲ್ಲಿನ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ಪ್ರಸ್ತುತ ವಾರ್ಷಿಕ ಸಹಿತ ವಸೂಲಿ ಮಾಡುವುದು ಹಾಗೂ ಬಹು ದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಾರ್ಷಿಕ ಬೇಡಿಕೆಗೆ ಅನುಗುಣವಾಗಿ ಸಮರ್ಪಕವಾಗಿ ವಸೂಲಿ ಮಾಡಲು ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ಮತ್ತು ಸದರಿ ಸ್ವಸಹಾಯ ಗುಂಪುಗಳಿಗೆ ವಸುಲಾದ ಮೊತ್ತದಲ್ಲಿ ಶೇಕಡವಾರು 5ರಷ್ಟನ್ನು ಪ್ರೋತ್ಸಾಹಧನದ ರೂಪದಲ್ಲಿ ನೀಡಲು ಸರ್ಕಾರವು ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಜನವರಿ 6 ರ ಒಳಗೆ ಯಾದಗಿರಿ ನಗರಸಭೆ ಕಚೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಲು ತಿಳಿಸಿದ್ದಾರೆ.
*ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು*:
ಮಹಿಳಾ ಸ್ವಸಹಾಯ ಸಂಘವು ಡೈನಲ್ಮಾ ಅಭಿಯಾನದಡಿ ನೊಂದಾಯಿಸಿರಬೇಕು ಹಾಗೂ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು. ಸಂಘಗಳ ಸದಸ್ಯರು ಕನಿಷ್ಠ 7ನೇ ತರಗತಿವರೆಗೆ ಶಿಕ್ಷಣವನ್ನು ಹಾಗೂ ಎಲೆಕ್ಟ್ರಾನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೊಂದಿರಬೇಕು. ಸ್ವ ಸಹಾಯ ಸಂಘವು ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಬ್ಯಾಂಕಿನ ಮೂಲಕ ಅಥವಾ ಆಂತರಿಕ ಸಾಲ ಪಡೆದು ನಿಯಮಿತ ಸಾಲ ಮರುಪಾವತಿ ಮಾಡಿರಬೇಕು. ಸ್ವಸಹಾಯ ಗುಂಪು ಸಂಬಂಧ ಪಟ್ಟ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡೇ ನಲ್ಮಾ ಅಭಿಯಾನದಡಿ ನೋಂದಾಯಿಸಿಕೊಂಡು ಮಾನ್ಯತೆ ಇರುವ ಎಂ.ಐ.ಎಸ್ ಕೋಡ್ ಪೂರೈಸಬೇಕು. ಸ್ವ ಸಹಾಯ ಗುಂಪು ರಚನೆಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಸ್ವ ಸಹಾಯ ಗುಂಪು ಮತ್ತು ಗುಂಪಿನ ಸದಸ್ಯರು ಯಾವುದೇ ಅಪರಾಧ ಅಥವಾ ಸಮಾಜ ವಿರೋಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಿನ್ನೆಲೆ ಹೊಂದಿರಬಾರದು. ನಗರ ಸ್ಥಳೀಯ ಸಂಸ್ಥೆಯಿಂದ ನಿಗದಿಪಡಿಸಲಾದ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸಲಾತಿಯ ಗುರಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಆಸಕ್ತಿ ಮತ್ತು ಬದ್ಧತೆಯನ್ನು ಹೊಂದಿರಬೇಕು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.